ಈಸ್ಟರ್ನ್ ಎಕಾನಮಿಸ್ಟ್
	ಆರ್ಥಿಕ ವಿಷಯಗಳಿಗೆ ಮೀಸಲಾದ ಇಂಗ್ಲಿಷ್ ವಾರಪತ್ರಿಕೆ. 1943ರಲ್ಲಿ ನವದೆಹಲಿಯಲ್ಲಿ ಪ್ರಾರಂಭವಾಯಿತು. ಭಾರತದಲ್ಲಿ ಪ್ರಕಟವಾಗುವ ಉತ್ತಮ ದರ್ಜೆಯ ವಾರಪತ್ರಿಕೆಯೆಂಬ ಹೆಸರುಗಳಿಸಿದೆ. ಈ ಪತ್ರಿಕೆ ಪ್ರತಿವರ್ಷವೂ ರಾಷ್ಟ್ರದ ಆಯವ್ಯಯ ಅಂದಾಜು ಪಟ್ಟಿಯ ವಿವೇಚನೆಗಾಗಿ ವಿಶೇಷಾಂಕವನ್ನೂ ವಾರ್ಷಿಕ ಸಂಚಿಕೆಯನ್ನೂ ಹೊರಡಿಸುತ್ತದೆ. ಪ್ರಚಲಿತ ಆರ್ಥಿಕ ಹಾಗೂ ವಾಣಿಜ್ಯ ಸಮಸ್ಯೆಗಳನ್ನು ಕುರಿತು ವಿಶೇಷಾಧ್ಯಯನ ನಡೆಸಿ ಅವುಗಳ ಬಗ್ಗೆ ಪುರವಣಿಗಳನ್ನು ಪ್ರಕಟಿಸುವುದಲ್ಲದೆ ಆಗಿಂದಾಗ್ಗೆ ಕೈಹೊತ್ತಿಗೆಗಳನ್ನೂ ಹೊರತರುತ್ತದೆ. ಈ ಕ್ಷೇತ್ರದಲ್ಲಿ ಸಂಶೋಧನೆ ನಡೆಸಲು ತೊಡಗಿರುವವರಿಗೆ ಇದು ಮಾರ್ಗದರ್ಶಕ. 												
(ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ